The Kolar News

Канал
Бизнес
Новости и СМИ
Английский
Логотип телеграм канала The Kolar News
@kolarnewsПродвигать
43
подписчика
807
фото
1
видео
815
ссылок
The Kolar News provides solutions customized to meet your needs and grow your businesses
К первому сообщению
ಜನರನ್ನು ಸೇರಿಸಲು ಬಿಡದಿದ್ರೂ ನಾನು, ಡಿಕೆ ಶಿವಕುಮಾರ್ ಇಬ್ಬರೇ ಪಾದಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ

ಬೆಂಗಳೂರು: ಪಕ್ಷಭೇದ ಮರೆತು ಜನವರಿ 9ರಿಂದ ಪಾದಯಾತ್ರೆಗೆ ಸಿದ್ಧತೆ ಮಾಡಲಾಗಿದೆ. ಹೀಗಿರುವಾಗ ಸರ್ಕಾರ, ಕೆಲ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಪಾದಯಾತ್ರೆ ನಿಲ್ಲಿಸಬೇಕೆಂದು ಕುತಂತ್ರ ಹೆಣೆಯಲಾಗಿದೆ. ರಾಜ್ಯದಲ್ಲಿ ಸರ್ಕಾರ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿದ್ದಾರೆ. ಬೇರೆ ದಿನಗಳಲ್ಲಿ ಕೆಲವು ಬೇರೆ ನಿರ್ಬಂಧ ವಿಧಿಸಿದ್ದಾರೆ. ಸಭೆ ಸಮಾರಂಭ ಮಾಡದಂತೆ ನಿರ್ಬಂಧ ವಿಧಿಸಿದ್ದಾರೆ. ಕೊವಿಡ್​ ನಿಯಮದಂತೆ ನಾವು ಪಾದಯಾತ್ರೆ ನಡೆಸುತ್ತೇವೆ. ನೀರಿಗಾಗಿ ನಡಿಗೆ ಜ.9ರಿಂದ ನಮ್ಮ ಪಾದಯಾತ್ರೆ ನಡೆಯುತ್ತೆ. ಸರ್ಕಾರದ ನಿಯಮಗಳನ್ನ ಅನುಸರಿಸಿ ಪಾದಯಾತ್ರೆ ಮಾಡ್ತೇವೆ. ನಾವು ಹೇಳಿದಂತೆ ಪಾದಯಾತ್ರೆ…

https://thekolarnews.in/siddaramaiah-dk-shivakumar-joint-press-meet-on-mekedatu-padayatre-amid-coronavirus-covid19/
ಸಂಸದ ಸುರೇಶ್‌ ವರ್ತನೆ ಖಂಡಿಸಿ ಪ್ರತಿಭಟನೆ

ಮುಳಬಾಗಿಲು: ರಾಮನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿಯೇ ಸಂಸದ ಡಿ.ಕೆ. ಸುರೇಶ್, ಎಂಎಲ್‌ಸಿ ರವಿ ದುಂಡಾವರ್ತನೆ ನಡೆಸಿರುವುದು ಖಂಡನೀಯ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೆಬ್ಬಣಿ ಬಿ.ಕೆ. ಅಶೋಶ್‌ ರೆಡ್ಡಿ ದೂರಿದರು.

ನಗರದ ಟಿಎಪಿಸಿಎಂಎಸ್ ಮುಂಭಾಗದ ಹನುಮಾನ್ ವೃತ್ತದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಮುಖಂಡರು ಗೂಂಡಾ…

https://thekolarnews.in/opposition-mp-condemns-sureshs-behavior-in-mulbagal/
ಆವಣಿ ಹೋಬಳಿಯ ವಿರೂಪಾಕ್ಷಿ ದೇಗುಲದ ಗೋಡೆ ಕುಸಿತ

ಮುಳಬಾಗಿಲು: ತಾಲ್ಲೂಕಿನ ಆವಣಿ ಹೋಬಳಿಯ ವಿರೂಪಾಕ್ಷಿ ಗ್ರಾಮದ ಪ್ರಸಿದ್ಧ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಬುಧವಾರ ಜಿಲ್ಲಾಧಿಕಾರಿ ಸೆಲ್ವಮಣಿ ಭೇಟಿ ನೀಡಿ ಪರಿಶೀಲಿಸಿದರು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ವಶದಲ್ಲಿದೆ. ದೇವಾಲಯದ ನಿರ್ವಹಣೆಯನ್ನು ರಾಜ್ಯ ಮುಜರಾಯಿ ಇಲಾಖೆ ನೋಡಿಕೊಳ್ಳುತ್ತದೆ.

ಪರಿಶೀಲನೆ ಬಳಿಕ ಜಿಲ್ಲಾಧಿಕಾರಿ ಅವರು ದೇಗುಲದ ಪ್ರಾಂಗಣದಲ್ಲಿ ತಾಲ್ಲೂಕು ಅಧಿಕಾರಿಗಳ ಸಭೆ ನಡೆಸಿದರು.

‘ಕಾಂಪೌಂಡ್ ಗೋಡೆಯನ್ನು ಶೀಘ್ರವೇ ದುರಸ್ತಿಗೊಳಿಸಲು…

https://thekolarnews.in/the-wall-of-virupakshi-temple-collapses-in-mulbagal/
ಕೆಜಿಎಫ್‌ನಲ್ಲಿ ಕ್ರೀಡಾಕೂಟಕ್ಕೆ ಚಾಲನೆ

ಕೆಜಿಎಫ್: ‘ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರುವ ಪೊಲೀಸ್ ಸಿಬ್ಬಂದಿಯಿಂದ ಮಾತ್ರ ಕ್ರಿಯಾಶೀಲರಾಗಿ ಕಾನೂನನ್ನು ಎತ್ತಿ ಹಿಡಿಯಲು ಸಾಧ್ಯ’ ಎಂದು ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಕೆ.ಆರ್. ನಾಗರಾಜ್ ಹೇಳಿದರು.

ಚಾಂಪಿಯನ್ ರೀಫ್ಸ್‌ನ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಪ್ರಾರಂಭವಾದ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಮನಸ್ಸು ಮತ್ತು ದೇಹ ಚೆನ್ನಾಗಿದ್ದರೆ ಕ್ರಿಯಾಶೀಲ ಮತ್ತು ಆರೋಗ್ಯಕರ ಜೀವನ ನಡೆಸಬಹುದು. ಸಮಾಜದ ಹಿತ ಕಾಪಾಡಬೇಕಾದ ಪೊಲೀಸರು ಆರೋಗ್ಯಕರವಾಗಿರಬೇಕು ಎಂದರು.

ದೈಹಿಕ ಸಾಮರ್ಥ್ಯ ಕಾಪಾಡಿಕೊಂಡು ಕೆಲಸ ಮಾಡಿದರೆ ಸಮಾಜವು…

https://thekolarnews.in/physical-fitness-advice-to-police-in-kgf/
ಕರ್ನಾಟಕದಲ್ಲಿ ಹೊಸದಾಗಿ 4,246 ಕೊರೊನಾ ಪ್ರಕರಣಗಳು ಪತ್ತೆ; ಬೆಂಗಳೂರಿನಲ್ಲಿ ಮಾತ್ರವೇ 3,605 ಕೊವಿಡ್ ಪಾಸಿಟಿವ್

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜನವರಿ 5) 4,246 ಕೊರೊನಾ ಪ್ರಕರಣಗಳು ಪತ್ತೆ ಆಗಿವೆ. ಬೆಂಗಳೂರಿನಲ್ಲಿ ಮಾತ್ರವೇ ಇಂದು ಒಂದೇ ದಿನ 3,605 ಜನರಿಗೆ ಸೋಂಕು ದೃಢವಾಗಿದೆ. ಬೆಂಗಳೂರಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರು ಬಲಿ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​ ಶೇ. 3.33ರಷ್ಟಿದೆ ಎಂದು ಟ್ವಿಟರ್​​ನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಇಂದು (ಜನವರಿ 05) ಹೊಸದಾಗಿ 4,246 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ…

https://thekolarnews.in/karnataka-new-corona-cases-death-toll-total-covid19-active-coronavirus-cases-on-january-05/
ಕೋಲಾರ: ಸಂಘಟನೆ–ಹೋರಾಟದಿಂದ ಹಕ್ಕು ಪಡೆಯಿರಿ

ಕೋಲಾರ: ‘ಅಂಬೇಡ್ಕರ್ ನೀಡಿದ ಸಂವಿಧಾನದ ಹಕ್ಕುಗಳಾದ ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ನ್ಯಾಯಸಮ್ಮತ ಅನುಕೂಲ ಪಡೆಯಿರಿ’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಅತಿಥಿ ಉಪನ್ಯಾಸಕರಿಗೆ ಸಲಹೆ ನೀಡಿದರು.

ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮಂಗಳವಾರ ಭೇಟಿಯಾಗಿ ಮಾತನಾಡಿ, ‘ಆಡಳಿತರೂಢ ಸರ್ಕಾರಕ್ಕೆ ಕಣ್ಣು ಕಿವಿ ಬಾಯಿ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ನಿರಂತರ ಹೋರಾಟ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗೆ…

https://thekolarnews.in/claim-right-from-organization-struggle/
ಕೋಲಾರ: ಸಂಸದ ಡಿ.ಕೆ.ಸುರೇಶರ ಪ್ರತಿಕೃತಿ ದಹನ, ಪ್ರತಿಭಟನೆ

ಕೋಲಾರ: ರಾಮನಗರದಲ್ಲಿ ನಡೆದ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ತೋರಿದ ವರ್ತನೆ ಸರಿಯಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಡಿ.ಕೆ.ಸುರೇಶ್‌ರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣ ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಸುರೇಶ್ ಮತ್ತು ವಿಧಾನ…

https://thekolarnews.in/mp-dk-sureshs-replica-burning-protest-in-kolar-by-bjp/
ಚಿಕ್ಕಬಳ್ಳಾಪುರದಲ್ಲಿ ಬುಧವಾರ ಬೆಳಗಿನ ಜಾವ ಮತ್ತೆ ಭೂಕಂಪನ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಗಪರ್ತಿ ಮತ್ತು ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬೀರಗಾನಹಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ 3.16ರ ಸುಮಾರಿನಲ್ಲಿ ಲಘು ಭೂಕಂಪನ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 2.6ರಷ್ಟು ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಕಳೆದ ವರ್ಷ ಡಿ. 21 ಮತ್ತು 23ರಂದು ಈ ಗ್ರಾಮಗಳೂ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ 3.6 ಮತ್ತು 3.3 ರಷ್ಟು ತೀವ್ರತೆಯ  ಭೂಕಂಪನ ಸಂಭವಿಸಿತ್ತು. 30ಕ್ಕೂ ಹೆಚ್ಚು ಮನೆಗಳಲ್ಲಿ…

https://thekolarnews.in/earthquake-again-in-chikkaballapur-and-residents-fear/
ಜಿಲ್ಲಾಸ್ಪತ್ರೆ ಮೂಲಸೌಕರ್ಯಕ್ಕೆ ₹7 ಕೋಟಿ ಬಿಡುಗಡೆ- MLC ಗೋವಿಂದರಾಜು ಹೇಳಿಕೆ

ಕೋಲಾರ: ‘ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದ ಕಟ್ಟಡವನ್ನು ವಿಸ್ತರಿಸಿ ₹ 7 ಕೋಟಿ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತದೆ. ಕಾಮಗಾರಿಗೆ ಆರೋಗ್ಯ ಸಚಿವ ಡಾ.ಸುಧಾಕರ್ ಜ.7ರಂದು ಚಾಲನೆ ನೀಡುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಹೇಳಿದರು.

ಇಲ್ಲಿನ ಎಸ್‌ಎನ್‌ಆರ್‌ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ತಾಯಿ ಮತ್ತು ಮಕ್ಕಳ ವಿಭಾಗದ ಕಟ್ಟಡ ಕಾಮಗಾರಿ ಪರಿಶೀಲಿಸಿ ಮಾತನಾಡಿ, ‘ಕೋವಿಡ್ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಉದ್ದೇಶಕ್ಕೆ ಆರೋಗ್ಯ ಸಚಿವರು ಜಿಲ್ಲೆಗೆ ಬರುತ್ತಿದ್ದು, ಆ ದಿನ…

https://thekolarnews.in/7-crore-fund-release-for-district-hospital-infrastructure-says-mlc-govindaraju/
Karnataka Weekend Curfew: ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ; 10, 12ನೇ ತರಗತಿ ಹೊರತಾಗಿ ಆಫ್​ಲೈನ್ ತರಗತಿ ರದ್ದು

ಬೆಂಗಳೂರು: ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್​ಲೈನ್​ ತರಗತಿ ನಿಲ್ಲುತ್ತದೆ. ಶಾಲಾ ಕಾಲೇಜುಗಳು ಆನ್​ಲೈನ್ ವಿಧಾನದಲ್ಲಿ ನಡೆಯುತ್ತದೆ. 6ನೇ ತಾರೀಖಿನಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರುತ್ತದೆ. ಆಹಾರ ವಸ್ತು, ಹೊಟೆಲ್​ಗಳಲ್ಲಿ ಪಾರ್ಸೆಲ್​, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್‌, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಸರ್ಕಾರಿ…

https://thekolarnews.in/bengaluru-weekend-curfew-fifty-fifty-rule-school-college-to-be-held-offline-classes-covid-coronavirus-new-guidelines/
ಬೆಂಗಳೂರಿನಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಕೇಸ್​; 24 ಗಂಟೆಯಲ್ಲಿ ಕೊವಿಡ್ ಪ್ರಕರಣಗಳು​ ದ್ವಿಗುಣ

Bengaluru Urban registers two thousand plus Coronavirus Covid19 cases in a single day

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ಮಂಗಳವಾರ (ಜನವರಿ 4) ಹೊಸದಾಗಿ 2,053 ಕೊರೊನಾ ಪ್ರಕರಣಗಳು ಪತ್ತೆ ಆಗಿದೆ. ಆ ಮೂಲಕ, ಬೆಂಗಳೂರಿನಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ 2 ಸಾವಿರ ಗಡಿ ದಾಟಿದಂತಾಗಿದೆ. ಬೆಂಗಳೂರಿನಲ್ಲಿ 24 ಗಂಟೆಯಲ್ಲಿ ಕೊರೊನಾ ಕೇಸ್​ ದ್ವಿಗುಣವಾಗಿದೆ. ನಿನ್ನೆ 1 ಸಾವಿರದಷ್ಟಿದ್ದ ಕೊರೊನಾ ಕೇಸ್​ ಇಂದು 2 ಸಾವಿರ ತಲುಪಿದೆ. ಕರ್ನಾಟಕ ರಾಜ್ಯದಲ್ಲಿ ಇಂದು 2,479…

https://thekolarnews.in/bengaluru-urban-registers-two-thousand-plus-coronavirus-covid19-cases-in-a-single-day/
ಕೋಲಾರ | ಬೇಡಿಕೆ ಈಡೇರಿಕೆ: ಸರ್ಕಾರದ ಜತೆ ಚರ್ಚೆಯ ಭರವಸೆ

ಕೋಲಾರ: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರನ್ನು ಭೇಟಿಯಾದ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಬೇಡಿಕೆ ಈಡೇರಿಸುವ ಸಂಬಂಧ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

‘ಅತಿಥಿ ಉಪನ್ಯಾಸಕರು ಉನ್ನತ ಶಿಕ್ಷಣ ಪಡೆದು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಅವರಿಗೆ ಯಾವುದೇ ಸೇವಾ ಭದ್ರತೆಯಿಲ್ಲ ಮತ್ತು ವರ್ಷಪೂರ್ತಿ ವೇತನ ಸಿಗುತ್ತಿಲ್ಲ. ಸರ್ಕಾರ ಈ ರೀತಿ ಉಪನ್ಯಾಸಕರನ್ನು ಶೋಷಣೆ ಮಾಡುತ್ತಿರುವುದು ದುರಂತ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ…

https://thekolarnews.in/demand-fulfillment-promise-of-discussion-with-government/
ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ! ಇಂದು ಸಿಎಂ ಸಭೆ ಬಳಿಗೆ ಕಠಿಣ ನಿಯಮ ಜಾರಿ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಮಿಕ್ರಾನ್, ಕೊವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸರ್ಕಾರ ಇಂದು (ಜ.4) ಮಹತ್ವದ ಸಭೆ ನಡೆಸುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅಧ್ಯಕ್ಷತೆಯಲ್ಲಿ ಇಂದು ಸಂಜೆ 6.30ಕ್ಕೆ ಸಭೆ ನಡೆಯಲಿದೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಸಚಿವರು, ತಜ್ಞರು, ಅಧಿಕಾರಿಗಳ ಜತೆ ಕೊವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಸಿಎಂ ಚರ್ಚೆ ನಡೆಸುತ್ತಾರೆ.

ಸಭೆಯಲ್ಲಿ ಕೆಲವು ಷರತ್ತುಗಳ ಜಾರಿ ಬಗ್ಗೆ ಬಿಬಿಎಂಪಿ…

https://thekolarnews.in/karmataka-cm-bommai-meeting-will-be-held-at-six-thirty-pm-today-for-tuff-rule/
ಮಕ್ಕಳಿ ಕೋವಿಡ್‌ ಲಸಿಕೆ; ಮೊದಲ ದಿನ 10 ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ

ಕೋಲಾರ: ಜಿಲ್ಲೆಯಲ್ಲಿ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ ಸೋಮವಾರ ಚಾಲನೆ ಸಿಕ್ಕಿದ್ದು, ಮೊದಲ ದಿನ 10 ಸಾವಿರ ಮಂದಿಗೆ ಲಸಿಕೆ ಹಾಕಲಾಯಿತು. ಇಡೀ ದಿನ ಲಸಿಕೆ ನೀಡಿಕೆ ಪ್ರಕ್ರಿಯೆ ಯಾವುದೇ ಸಮಸ್ಯೆಯಿಲ್ಲದೆ ಸುಸೂತ್ರವಾಗಿ ನಡೆಯಿತು.

ಮಕ್ಕಳಿಗೆ ಕೊರೊನಾ ಸೋಂಕು ತಗುಲುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಆರೋಗ್ಯ ಇಲಾಖೆಯು ಸಾಕಷ್ಟು ಸಿದ್ಧತೆಯೊಂದಿಗೆ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಿಸಿತು.…

https://thekolarnews.in/covid-vaccine-for-children-in-kolar-first-day-10-thousand-children-got/
ಯುವ ಪೀಳಿಗೆ ಸಿನಿಮಾಕ್ಕೆ ಆಕರ್ಷಿತರಾಗಿದ್ದಾರೆ- ಶಾಸಕ ಕೆ.ಶ್ರೀನಿವಾಸಗೌಡ

ಕೋಲಾರ: ‘ಪ್ರಸಕ್ತ ಕಾಲಘಟ್ಟದಲ್ಲಿ ಸಿನಿಮಾರಂಗ ಹೆಚ್ಚು ಬೆಳೆಯುತ್ತಿದ್ದು, ಯುವ ಪೀಳಿಗೆಯು ಇದಕ್ಕೆ ಆಕರ್ಷಿತವಾಗುತ್ತಿದೆ. ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನವು ನೇಪಥ್ಯಕ್ಕೆ ಸರಿದಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಯಕ್ಷಗಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನೋತ್ಸವ, ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಜನರಿಗೆ ಈಗ ನಾಟಕಗಳು ಹಾಗೂ ಕೇಳಿಕೆ ಎಂಬುದು ಬರಿ ಜ್ಞಾಪಿಸಿಕೊಳ್ಳುವುದಕ್ಕೆ ಸೀಮಿತವಾಗಿದೆ. ಈಗಿನ ಜನರು ಹೆಚ್ಚು ಸಿನಿಮಾಗಳಿಗೆ ಹೊಂದಿಕೊಂಡಿದ್ದಾರೆ. ಹಿಂದೆ…

https://thekolarnews.in/young-generation-attracted-to-cinema-said-mla-k-srinivasa-gowda/
ರಾಮನಗರ: ಸಿಎಂ ಸಮ್ಮುಖದಲ್ಲೇ ಅಶ್ವತ್ಥ ನಾರಾಯಣ, ಡಿಕೆ ಸುರೇಶ್ ವಾಕ್ಸಮರ; ವೇದಿಕೆಯಲ್ಲೇ ಧರಣಿ ನಡೆಸಿದ ಕಾಂಗ್ರೆಸ್!

ರಾಮನಗರ: ರಾಮನಗರದಲ್ಲಿ ಕಾರ್ಯಕ್ರಮ ವೇಳೆ ಸಚಿವ, ಸಂಸದರ ಗಲಾಟೆ ನಡೆದಿದೆ. ಡಾ.ಅಶ್ವತ್ಥ್ ನಾರಾಯಣ, ಸಂಸದ ಡಿ.ಕೆ.ಸುರೇಶ್ ಮಧ್ಯೆ ಗಲಾಟೆ ಉಂಟಾಗಿದೆ. ಸಚಿವ ಡಾ.ಅಶ್ವತ್ಥ್ ಭಾಷಣಕ್ಕೆ ಡಿ.ಕೆ.ಸುರೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ನಮ್ಮ ಕಾಲದಲ್ಲೇ ಅಡಿಗಲ್ಲು, ನಮ್ಮ ಕಾಲದಲ್ಲೇ ಉದ್ಘಾಟನೆ’ ‘ನಮ್ಮ ಸರ್ಕಾರದಲ್ಲಿ ಬೇರೆ ಸರ್ಕಾರದ ರೀತಿ ಅಲ್ಲ’ ಎಂದು ಅಶ್ವತ್ಥ್ ನಾರಾಯಣ ಭಾಷನ ಮಾಡಿದ್ದಾರೆ. ನೀರಾವರಿ ಯೋಜನೆ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ನಮ್ಮ ಅಭಿವೃದ್ಧಿ ಮಾಡಿಕೊಳ್ಳುವುದನ್ನು ಮಾತ್ರ ಮಾಡಿಕೊಳ್ಳಲ್ಲ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಈ…

https://thekolarnews.in/dk-suresh-ashwath-narayan-fight-in-public-program-at-ramanagara-infront-of-cm-basavaraj-bommai/
Covid surge in Bengaluru: Some schools postpone reopening, stick to e-class

BENGALURU: With Covid cases in Bengaluru on the rise, many private schools are worried that the attendance for in-person learning will again be affected. Some of them have deferred reopening of physical classes after Christmas vacation.
Many schools said parents have started raising concerns over sending their children to campuses when classes resume after Christmas…

https://thekolarnews.in/covid-surge-in-bengaluru-some-schools-postpone-reopening-stick-to-e-class/
ಕೋವಿಡ್‌ ನಿಯಂತ್ರಣ ಕುರಿತು ತಜ್ಞರ ಜೊತೆ ಮಂಗಳವಾರ ಸಭೆ– ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ ಹೊಸ ಪ್ರಕರಣಗಳ ದೃಢ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಜ. 4) ಸಂಜೆ ತಜ್ಞರ ಜೊತೆ ಚರ್ಚಿಸುತ್ತೇನೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಒಟ್ಟಾರೆ ಸ್ಥಿತಿಗತಿಯನ್ನು ಅವಲೋಕಿಸುತ್ತೇನೆ. ಎಲ್ಲ ವಿಚಾರಗಳನ್ನು ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿ ನಿಯಂತ್ರಣಕ್ಕೆ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸುತ್ತಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ ಅಕ್ಕಪಕ್ಕದ ರಾಜ್ಯಗಳಲ್ಲಿಯೂ…

https://thekolarnews.in/covid-coronavirus-lockdown-karnataka-basavaraj-bommai-omicron/
ಸಚಿವ ನಾಗೇಶ್‌ ಅತಿಥಿ ಉಪನ್ಯಾಸಕರ ಮೇಲೆ ದರ್ಪ ಖಂಡನೀಯ : ಕ್ಯಾಂಪಸ್ ಫ್ರಂಟ್ ಕೋಲಾರ

ಕೋಲಾರ: ‘ಅತಿಥಿ ಉಪನ್ಯಾಸಕರ ಮೇಲೆ ದರ್ಪ ತೋರಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ರಾಜೀನಾಮೆ ನೀಡಬೇಕು’ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಝುಬೈರ್ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸೇವಾ ಭದ್ರತೆ ಸೇರಿದಂತೆ ತಮ್ಮ ಭೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲು ಹೋಗಿದ್ದ ಅತಿಥಿ ಉಪನ್ಯಾಸಕರ ವಿರುದ್ಧ ಸಚಿವ ನಾಗೇಶ್‌ ಅವರು ಹರಿಹಾಯ್ದು ಉದ್ಧಟತನ ತೋರಿರುವುದು ಖಂಡನೀಯ. ಅವರು ಸಚಿವ ಸ್ಥಾನದ ಘನತೆ ಮರೆತು ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ’ ಎಂದು…

https://thekolarnews.in/demand-for-minister-nagesh-resignation-by-campus-front-kolar/
ಶ್ರೀನಿವಾಸಪುರ: ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ 50 ಜನ ಅಸ್ವಸ್ಥ

ಶ್ರೀನಿವಾಸಪುರ: ಹೊಸ ವರ್ಷದ ಪ್ರಯುಕ್ತ ತಾಲ್ಲೂಕಿನ ಬೀರಗಾನಹಳ್ಳಿ ಗ್ರಾಮದಲ್ಲಿ ಶನಿವಾರ ಗಂಗಮ್ಮ ದೇವಸ್ಥಾನದಲ್ಲಿ ವಿತರಿಸಲಾದ ಪ್ರಸಾದ ಸೇವಿಸಿ 13 ಮಕ್ಕಳು ಮಕ್ಕಳು ಸೇರಿದಂತೆ 50 ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ.

ದೇವಸ್ಥಾನದಲ್ಲಿ ಮಧ್ಯಾಹ್ನ ವಿತರಿಸಲಾದ ಚಿತ್ರಾನ್ನ ಮತ್ತು ಕೇಸರಿಬಾತ್‌ ಸೇವಿಸಿದ ಗ್ರಾಮಸ್ಥರಿಗೆ ಸಂಜೆ ವಾಂತಿ, ಭೇದಿ ಆರಂಭವಾಗಿದೆ. ತಕ್ಷಣ ಎಲ್ಲರನ್ನೂ ಶ್ರೀವಾಸಪು ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮತ್ತು ಯಲ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾಲ್ಲೂಕು ವೈದ್ಯಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

https://thekolarnews.in/many-hospitalized-after-consumption-of-prasadam-in-kolar/
Ещё