The Kolar News

Канал
Бизнес
Новости и СМИ
Английский
Логотип телеграм канала The Kolar News
@kolarnewsПродвигать
43
подписчика
807
фото
1
видео
815
ссылок
The Kolar News provides solutions customized to meet your needs and grow your businesses
К первому сообщению
Jan 2: Karnataka registers 1,187 COVID-19 cases, six deaths

Bengaluru, Jan 2: Continuing the rising trend of COVID-19 cases for the second day, Karnataka recorded 1,187 fresh infections and six deaths taking the cumulative cases and fatalities in the state to 30,09,557 and 38,346 respectively, the health department said on Sunday.

The department said in its bulletin that 275 people were discharged, taking the…

https://thekolarnews.in/jan-2-karnataka-registers-1187-covid-19-cases-six-deaths/
ಓಮಿಕ್ರಾನ್‌ ಸ್ಫೋಟ – ಬೆಂಗಳೂರಿನಲ್ಲಿ ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಆರ್‌.ಅಶೋಕ್‌

ಬೆಂಗಳೂರು: ಮೂರನೇ ಅಲೆ ಬರೋದು ನಿಶ್ಚಿತ ಅನ್ನುವ ವಾತಾವರಣ ಇದೆ. ಬೆಂಗಳೂರು ರೆಡ್ ಝೋನ್ ಅಂತ ಕೇಂದ್ರ ಗುರುತಿಸಿದೆ. ರಾಜ್ಯದಲ್ಲಿ ಆರೂವರೆ ಕೋಟಿ ಜನರ ಜೀವ ಕಾಪಾಡೋದು ಮುಖ್ಯವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಿಎಂ ಸಭೆ ಬಳಿಕ ಸಚಿವ ಆರ್.ಅಶೋಕ್ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕೋವಿಡ್, ಓಮಿಕ್ರಾನ್ ಕೇಸ್‍ಗಳ ಹೆಚ್ಚಳ ಹಿನ್ನೆಲೆ ಕೋವಿಡ್ ಮೂರನೇ ಅಲೆ ಬಗ್ಗೆ ಪ್ರತ್ಯೇಕ ಸಭೆ ಮಾಡೋದಾಗಿ ಸಿಎಂ ಹೇಳಿದ್ದಾರೆ. ಮೂರನೇ ಅಲೆ ಬರೋದು ನಿಶ್ಚಿತ ಅನ್ನುವ ವಾತಾವರಣ ಇದೆ.…

https://thekolarnews.in/r-ashok-said-the-bengaluru-red-zone-identified-a-center-corona-lockdown/
ದೇವಸ್ಥಾನದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿ ದೇಶವನ್ನು ಅದಾನಿ, ಅಂಬಾನಿಗೆ ಒತ್ತೆ ಇಡುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರವು ರಾಜ್ಯದ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವುದಾಗಿ, ಸ್ವಾಯತ್ತಗೊಳಿಸುವುದಾಗಿ ಹೇಳುತ್ತಿದೆ. ಇದು ಮನುವಾದಿಗಳ ಪುರಾತನ ಅಜೆಂಡ. ಹಾಗಾಗಿ ಜನರು ಇವರ ದುಷ್ಟ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಧರ್ಮ, ದೇವರು, ದೇವಸ್ಥಾನ, ಮಸೀದಿ, ಚರ್ಚುಗಳ ವಿಷಯದಲ್ಲಿ ರಾಜಕೀಯ ಮಾಡಿಕೊಂಡು ದೇಶವನ್ನು ಅದಾನಿ, ಅಂಬಾನಿ ಮುಂತಾದ ಬಂಡವಾಳಿಗರಿಗೆ ಒತ್ತೆ ಇಡುತ್ತಿರುವ ಬಿಜೆಪಿಯು ಆರಂಭದಿಂದಲೂ ಸುಳ್ಳುಗಳ ಫ್ಯಾಕ್ಟರಿ ಇಟ್ಟುಕೊಂಡು ಸುಳ್ಳುಗಳನ್ನೇ ಉತ್ಪಾದಿಸಿ ಜನರಿಗೆ ಮಾರಿ ರಾಜಕಾರಣ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ…

https://thekolarnews.in/separating-hindu-temples-from-muzrai-department-siddaramaiah-lashes-out-at-bjp/
ಇಷ್ಟವಿದ್ರೆ ಕೆಲಸ ಮಾಡಿ, ಇಲ್ಲ ಬೇರೆ ನೋಡಿಕೊಳ್ಳಿ: ಸಚಿವ ನಾಗೇಶ್‌ ಗರಂ

ಕೋಲಾರ: ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿ ಶುಕ್ರವಾರ ಮನವಿ ಸಲ್ಲಿಸಲು ಮುಂದಾದ ಅತಿಥಿ ಉಪನ್ಯಾಸಕರ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಗರಂ ಆದರು.

ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನಲ್ಲಿ ಡಿವಿಜಿ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಸಚಿವರನ್ನು ಮಾರ್ಗ ಮಧ್ಯೆ ಭೇಟಿಯಾದ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು, ‘ನಾವು ಶೋಷಣೆಗೆ ಒಳಗಾಗಿದ್ದೇವೆ. ದಯವಿಟ್ಟು ನಮಗೆ ಸೇವಾ ಭದ್ರತೆ ಕಲ್ಪಿಸಿ, ವೇತನ ಹೆಚ್ಚಳ…

https://thekolarnews.in/minister-nagesh-resents-against-guest-lecturers-in-kolar/
ಕೋಲಾರದಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹ: ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕೋಲಾರ: ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತ್ತು ಶಿವಸೇನೆ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಸದಸ್ಯರು ಇಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

ಗಾಂಧಿವನದಿಂದ ಚಂಪಕ್‌ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಶಿವಸೇನೆ ಮತ್ತು ಎಂಇಎಸ್‌ ಕಾರ್ಯಕರ್ತರು ಕನ್ನಡದ ಬಾವುಟಕ್ಕೆ ಬೆಂಕಿ ಹಚ್ಚಿ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿ ಪುಂಡಾಟಿಕೆ ನಡೆಸಿದ್ದಾರೆ. ಭಾಷೆ ಮತ್ತು ಗಡಿ ವಿಚಾರವಾಗಿ ಪದೇಪದೇ ಕ್ಯಾತೆ ತೆಗೆದು…

https://thekolarnews.in/protest-in-kolar-demand-for-mes-ban/
‘ಪ್ರಜಾವಾಣಿ’ ವರ್ಷದ ಸಾಧಕ ಸಯ್ಯದ್ ಪಾಷಾ: ಬಂಗಾರಪೇಟೆಯ ‘ಬಂಗಾರದ ಮನುಷ್ಯ’

ಬಲಗೈಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ತತ್ವಕ್ಕೆ ಅಂಟಿಕೊಂಡವರು ಸಯ್ಯದ್ ಅಫ್ಸರ್ ಪಾಷಾ. ಸರಳ ವ್ಯಕ್ತಿತ್ವದ ಅವರದು ಕೋಲಾರ ಜಿಲ್ಲೆಯ ಬಂಗಾರಪೇಟೆ. ಅಲ್ಲಿಯೇ ಬೆಳೆದದ್ದು, ಓದಿದ್ದು. ಅವರು ಒಂಥರಾ ಬಂಗಾರಪೇಟೆಯ ‘ಬಂಗಾರದ ಮನುಷ್ಯ’.

ವೃತ್ತಿಯಲ್ಲಿ ಅವರು ಮುಬಾರಕ್‌ ಹೋಟೆಲ್‌ ಮಾಲೀಕ. ಪ್ರವೃತ್ತಿಯಲ್ಲಿ ಸಮಾಜ ಸೇವಕ. ಬಡವರಿಗಾಗಿ ಛತ್ರ ಕಟ್ಟಿಸುತ್ತಾರೆ, ತಾವೇ ಮುಂದೆ ನಿಂತು ಉಚಿತವಾಗಿ ಮದುವೆ ಮಾಡಿಸುತ್ತಾರೆ. ಚಳಿಯಲ್ಲಿ ಮಲಗಿದವರಿಗೆ ಕಂಬಳಿ ಕೊಡುತ್ತಾರೆ. ಈ ಎಲ್ಲವನ್ನೂ ಸದ್ದಿಲ್ಲದೆ ಮಾಡುವ ಶ್ರಮಜೀವಿ.

ಹಬ್ಬವೆಂದು ಯಾರೇ ಸಹಾಯ ಕೋರಿ ಬಂದರೂ…

https://thekolarnews.in/prajavani-achievers-2021-social-service-by-syed-afsar-pasha-from-bangarpete-kolar/
ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧ: ಮಾಜಿ ಪ್ರಧಾನಿ ಎಚ್‍ಡಿಡಿ

Open discussion with Congress says Ex Prime Minister HD Deve Gowda

ಬೆಂಗಳೂರು – ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಏನು ಮಾಡಿದೆ, ಬಿಜೆಪಿ ಏನು ಮಾಡಿದೆ, ಜೆಡಿಎಸ್ ಏನು ಮಾಡಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹೇಳಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಮಂಜುನಾಥ್ ಅವರೊಂದಿಗೆ, ಹದಗೆಟ್ಟಿರುವ ವಿವಿಧ ರಸ್ತೆಗಳನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಕ್ಷೇತ್ರದ…

https://thekolarnews.in/open-discussion-with-congress-says-hd-deve-gowda/
Union Health Minister Assures NEET-PG Counseling Will Start Before January 6, 2022: IMA President

New Delhi: Indian Medical Association (IMA) President Sahajanand Prasad Singh on Friday informed Union Health Minister Mansukh Mandaviya assured that NEET-PG counseling will start before January 6, 2022.

“There will be no FIRs on the doctors. There is no need to panic for the new variant of COVID, but all precautions should be taken,” the…

https://thekolarnews.in/union-health-minister-mansukh-mandaviya-assures-neet-pg-counseling-will-start-before-january-6-2022-ima-president/
ಅನೈತಿಕ, ಅಧರ್ಮ; ಹೊಸ ವರ್ಷಾಚರಣೆಗೆ ಬಜರಂಗದಳ ವಿರೋಧ

Bajrang Dal Says No To New Year Celebrations

ವಾರಾಣಸಿ: ಪ್ರೇಮಿಗಳ ದಿನಾಚರಣೆಯ ಬಳಿಕ ಹೊಸ ವರ್ಷದ ವರ್ಷಾಚರಣೆಗೂ ಬಜರಂಗದಳ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಕಾಶಿಯಲ್ಲಿ ಹೋಟೆಲ್, ಮಾಲ್‌ಗಳಲ್ಲಿ ಪೋಸ್ಟರ್ ಅಂಟಿಸಿರುವ ಬಜರಂಗದಳದ ಕಾರ್ಯಕರ್ತರು, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದರ ವಿರುದ್ಧ ಜನರನ್ನು ಎಚ್ಚರಿಸಿದೆ.

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಚಾರವನ್ನು ಅನೈತಿಕ ಮತ್ತು ಅಧರ್ಮ ಎಂದು ಬಣ್ಣಿಸಿರುವ ಬಜರಂಗದಳವು ಹೊಸ ವರ್ಷಾಚರಣೆಯನ್ನು ಬಲವಾಗಿ ವಿರೋಧಿಸಿದೆ.

ಬಜರಂಗದಳದ ಸಂಚಾಲಕ ನಿಖಿಲ್ ತ್ರಿಪಾಠಿ ರುದ್ರ ಪ್ರತಿಕ್ರಿಯಿಸಿದ್ದು, ‘ಹೊಸ ವರ್ಷಾಚರಣೆ ಅರ್ಥಹೀನ…

https://thekolarnews.in/bajrang-dal-says-no-to-new-year-celebrations/
ಟ್ರಾಫಿಕ್ ಪೊಲೀಸರಿಗೆ ಮೈಮೇಲೆಯೂ ಕ್ಯಾಮಾರಾ! ಸುಗಮ ಸಂಚಾರಕ್ಕಾಗಿ ತಂತ್ರಜ್ಞಾನ ಆಧಾರಿತ ಸೌಲಭ್ಯಗಳ ಲೋಕಾರ್ಪಣೆ

CM Basavaraj Bommai launched Technology Based Facilities for Smooth Traffic in bengaluru.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದ ಟೌನ್ ಹಾಲ್ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸುಗಮ ಸಂಚಾರಕ್ಕಾಗಿ ಮಾರ್ಗಸೂಚಿಗಳು, ತಂತ್ರಜ್ಞಾನಾಧಾರಿತ ಸೌಲಭ್ಯಗಳ ಲೋಕಾರ್ಪಣೆ ಮಾಡಿದ್ದಾರೆ. ತಂತ್ರಜ್ಞಾನಾಧಾರಿತ ಸೌಲಭ್ಯಗಳು, ಸಂಚಾರಿ ಬೀಟ್ ವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರ ಕಾರ್ಯನಿರ್ವಣೆಗೆ ಮಾರ್ಗಸೂಚಿಗಳ ಲೋಕಾರ್ಪಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಸುರೇಶ್ ಕುಮಾರ್, ಡಿಜಿ ಐಜಿಪಿ ಪ್ರವೀಣ್…

https://thekolarnews.in/cm-basavaraj-bommai-launched-technology-based-facilities-for-smooth-traffic-in-bengaluru/
ರಾಜಕಾರಣಕ್ಕಿಂತ ಸಹಕಾರಿ ವ್ಯವಸ್ಥೆ ಮುಖ್ಯ: ಗೋವಿಂದಗೌಡ

ನರಸಾಪುರ/ಕ್ಯಾಲನೂರು: ‘ರಾಜಕಾರಣಕ್ಕಿಂತ ಬಡವರ ವ್ಯವಸ್ಥೆ ಉಳಿಸುವುದು ಮುಖ್ಯ. ಬದ್ಧತೆಯಿಲ್ಲದ ಪ್ಯಾಕ್ಸ್‌ಗಳ ಸಿಇಒಗಳನ್ನು ಮನೆಗೆ ಕಳುಹಿಸಿ. ಜ.15ರೊಳಗೆ ಲೆಕ್ಕ ಪರಿಶೋಧನೆ ಹಾಗೂ ಗಣಕೀಕರಣ ಪೂರ್ಣಗೊಳಿಸಿ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಪ್ಯಾಕ್ಸ್ ಆಡಳಿತ ಮಂಡಳಿಗೆ ತಾಕೀತು ಮಾಡಿದರು.

ಡಿಸಿಸಿ ಬ್ಯಾಂಕ್‌ನ ತಾಲ್ಲೂಕು ನಿರ್ದೇಶಕರ ತಂಡದೊಂದಿಗೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ (ಪ್ಯಾಕ್ಸ್‌) ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ‘ರಾಜಕಾರಣಕ್ಕಿಂತ ಸಹಕಾರ ವ್ಯವಸ್ಥೆ ಉಳಿಯಬೇಕು. ಹಿಂದೆ ಸಹಕಾರಿ ವ್ಯವಸ್ಥೆಗೆ ದಕ್ಕೆಯಾಗಿ ರೈತರು,…

https://thekolarnews.in/cooperation-is-more-important-than-politics-in-kolar/
ಅತಿಥಿ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು ; ಕ್ಯಾಂಪಸ್ ಫ್ರಂಟ್ ಮನವಿ*

ಅತಿಥಿ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು ; ಕ್ಯಾಂಪಸ್ ಫ್ರಂಟ್ ಮನವಿ

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸದೇ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಸುಮಾರು 14,447 ಅತಿಥಿ ಶಿಕ್ಷಕರಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಅರೆಕಾಲಿಕವಾಗಿ ಅಲ್ಪವೇತನ ಪಡೆದುಕೊಂಡು ಸಮಾಜದಲ್ಲಿ ಸ್ವಾಭಾಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಉಪನ್ಯಾಸ ನೀಡಿವ ಶಿಕ್ಷಕರು ಮಾಸಿಕವಾಗಿ ಹನ್ನೊಂದು ಸಾವಿರದಿಂದ ಹದಿಮೂರು ಸಾವಿರದಷ್ಟು ವೇತನವನ್ನು ಪಡೆಯುತ್ತಿದ್ದಾರೆ. ವರ್ಷದಲ್ಲಿ ಎಂಟು ತಿಂಗಳು ಮಾತ್ರ ವೇತನ…

https://thekolarnews.in/ಅತಿಥಿ-ಉಪನ್ಯಾಸಕರೊಂದಿಗೆ-ವಿ/
ಮರ ಕಳ್ಳಸಾಗಣೆ ಆರೋಪ ಸಾಬೀತುಪಡಿಸಿದರೆ ರಾಜೀನಾಮೆ ಕೊಡುವೆ : ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು

ಕೋಲಾರ : ಶಾಸಕ ಶ್ರೀನಿವಾಸ ಗೌಡರು ನನ್ನ ವಿರುದ್ಧ ಮಾಡಿರುವ ಮರ ಕಳ್ಳ ಸಾಗಣೆಯ ಆರೋಪ ಸಾಬೀತುಪಡಿಸಿದರೆ ರಾಜೀನಾಮೆ ಕೊಡುತ್ತೇನೆ. ಆರೋಪ ಸಾಬೀತು ಪಡಿಸಲು ಸಾಧ್ಯವಾಗ ದಿದ್ದರೆ ಶ್ರೀನಿವಾಸಗೌಡರು ರಾಜೀನಾಮೆ ಕೊಡಲು ಸಿದ್ಧವೇ’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಸವಾಲು ಹಾಕಿದರು.  ‘ಸಾರಿಗೆ ಸಂಸ್ಥೆ ಯಲ್ಲಿನ ನನ್ನ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಶ್ರೀನಿವಾಸ ಗೌಡರು ನನ್ನ ವಿರುದ್ಧ ಮಾಡಿರುವ ಆರೋಪ ಕೇಳಿ ದಿಗ್ಭ್ರಮೆಯಾಯಿತು. ಹಿರಿಯರಾದ ಅವರ ಬಗ್ಗೆ ತುಂಬಾ ಗೌರವವಿದೆ’ ಎಂದರು. ‘ಶ್ರೀನಿವಾಸಗೌಡರು ಶಾಸಕ…

https://thekolarnews.in/i-will-resign-if-proved-the-tree-smuggling-allegation-says-kolar-mlc-govind-raju/
Sericulture: ನವೆಂಬರ್​ ಮಳೆ ಪರಿಣಾಮ:​ ಕೋಲಾರದಲ್ಲಿ ಚಿನ್ನಕ್ಕಿಂತ ರೇಷ್ಮೆಯೇ ದುಬಾರಿ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಳೆದ ನವೆಂಬರ್​ ತಿಂಗಳಲ್ಲಿ ಸುರಿದ ನಿರಂತರ ಮಳೆಯ ಪರಿಣಾಮ ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಲೆ ದಿಢೀರ್​ ಏರಿಕೆ ಕಂಡಿದೆ. ಮಳೆಗೆ ರೇಷ್ಮೆ ಬೆಳೆ ಹಾಳಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ರೇಷ್ಮೆ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ರೇಷ್ಮೆ ಬೆಳೆಯ ಬೆಲೆ ಹೆಚ್ಚಾಗಿದೆ. ಕಳೆದ ತಿಂಗಳು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ 52 ಹಳ್ಳಿಗಳ 352 ಬೆಳೆಗಾರರು 316 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹಿಪ್ಪುನೇರಳೆ ಬೆಳೆಗೆ ಹಾನಿಯಾಗಿದೆ.

ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ…

https://thekolarnews.in/silk-is-getting-good-price-in-kolar-market-crop-lost-due-to-heavy-rains/
ಮಕ್ಕಳಲ್ಲಿ ನಾಗರೀಕ ಪ್ರಜ್ಞೆ ಬೆಳೆಸಿ | ಭಾರತ ಸೇವಾದಳ ಕೋಲಾರ

ಕೋಲಾರ: ‘ಭಾರತ ಸೇವಾದಳದಲ್ಲಿ ಶಿಸ್ತು ಇದೆ. ಸಂಘಟನೆಯು ದೇಶಪ್ರೇಮ, ರಾಷ್ಟ್ರಭಕ್ತಿಯನ್ನು ಜವಾಬ್ದಾರಿಯುತವಾಗಿ ಕಲಿಸುತ್ತದೆ’ ಎಂದು ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಭಾರತ ಸೇವಾದಳ ಸಪ್ತಾಹ ಉದ್ಘಾಟಿಸಿ ಮಾತನಾಡಿ, ‘ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಭಾರತ ಸೇವಾದಳ ಶಾಖೆ ಆರಂಭಿಸಬೇಕು’ ಎಂದರು.

‘ಸೇವಾದಳವು ಸಾಮಾಜಿಕ ಚಿಂತನೆಯ ಕಾರ್ಯಕ್ರಮ ನಡೆಸುತ್ತಿದೆ. ವಾಚನಾಲಯಗಳಲ್ಲಿ ಹುತಾತ್ಮರ ಜೀವನಚರಿತ್ರೆ ಓದಲು ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು. ಮಕ್ಕಳಿಗೆ…

https://thekolarnews.in/develop-civic-consciousness-in-children-kolar/
ರಾಜ್ಯದಲ್ಲಿ ಇಂದು ರಾತ್ರಿಯಿಂದಲೇ ನೈಟ್ ಕರ್ಫ್ಯೂ ಜಾರಿ; 10 ಗಂಟೆಯೊಳಗೆ ಎಲ್ಲವೂ ಬಂದ್, ಮನೆ ಸೇರಿದ್ರೆ ಸೇಫ್ ಇಲ್ಲ ಅಂದ್ರೆ ಬೀಳುತ್ತೆ ಫೈನ್

ಬೆಂಗಳೂರು: ಇಂದು(ಡಿಸೆಂಬರ್ 28) ರಾತ್ರಿ 10 ಗಂಟೆಯಿಂದ ಕರುನಾಡಿನ ಚಿತ್ರಣವೇ ಬದಲಾಗಲಿದೆ. ಕೊರೊನಾ, ಒಮಿಕ್ರಾನ್ ಕಟ್ಟಿ ಹಾಕಲು ನೈಟ್ ಕರ್ಫ್ಯೂ ಜಾರಿಯಾಗಲಿದೆ. ಇಷ್ಟು ದಿನ ತಡರಾತ್ರಿವರೆಗೂ ಓಡಾಡ್ತಿದ್ದವರೆಲ್ಲ ನಾಳೆ ರಾತ್ರಿ 10 ಗಂಟೆಯೊಳಗೆ ಮನೆ ಸೇರಿಕೊಳ್ಳಬೇಕಿದೆ. ತಡರಾತ್ರಿ ಕ್ಲಬ್, ಪಬ್ ಸುತ್ತಾಡುತ್ತಿದ್ದವರು ನಾಳೆಯಿಂದ ಮನೆಯಲ್ಲೇ ಲಾಕ್. ವ್ಯಾಪಾರ-ವಹಿವಾಟು ಎಲ್ಲವೂ ರಾತ್ರಿ 10 ಗಂಟೆಯೊಳಗೆ ಬಂದ್ ಆಗಲಿದೆ.

ಒಮಿಕ್ರಾನ್ ಸೋಂಕಿನ ಸದ್ದಡಗಿಸಲು ರಾಜ್ಯ ಸರ್ಕಾರ ನೈಟ್‌ ಕರ್ಪ್ಯೂ ಮೊರೆ ಹೋಗಿದೆ. ಇಂದು ರಾತ್ರಿ 10 ಗಂಟೆಯಿಂದಲೇ ರಾಜ್ಯದಲ್ಲಿ ಟೈಟ್…

https://thekolarnews.in/karnataka-government-announces-night-curfew-for-10-days-starting-today/
ಪೊಲೀಸ್‌ ಸಿಬ್ಬಂದಿ ಜನಸ್ನೇಹಿಯಾಗಿ ವರ್ತಿಸಿ: ಕೋಲಾರ ಎಸ್ಪಿ ಡೆಕ್ಕಾ ಕಿಶೋರ್‌ಬಾಬು

ಕೋಲಾರ: ‘ಸಿಬ್ಬಂದಿ ಜನಸ್ನೇಹಿಯಾಗಬೇಕು. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಹೇಳಿದರು.

ಇಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಫೋನ್–ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆ ಸ್ವೀಕರಿಸಿ ಮಾತನಾಡಿ, ‘ಇಲಾಖೆಯ ಜನಸ್ನೇಹಿ ತತ್ವಗಳನ್ನು ಜನರಿಗೆ ಮುಟ್ಟಿಸಿ ಪೊಲೀಸರು ಮತ್ತು ಜನರ ಮಧ್ಯೆ ಸೌಹಾರ್ದಯುತ ವಾತಾವರಣ ನಿರ್ಮಿಸುವುದು ಫೋನ್‌ಇನ್‌ ಕಾರ್ಯಕ್ರಮದ ಮೂಲ ಉದ್ದೇಶ’ ಎಂದರು.

‘ನೊಂದವರು, ದುರ್ಬಲ ವರ್ಗದವರು ನ್ಯಾಯ ಕೋರಿ ಪೊಲೀಸ್‌ ಠಾಣೆಗೆ ಬರುತ್ತಾರೆ. ಸಿಬ್ಬಂದಿ…

https://thekolarnews.in/act-as-a-populist-cop-says-kolar-police-chief/
ಕೋಲಾರದಲ್ಲಿ ರಾತ್ರಿ ಕರ್ಫ್ಯೂ: ಹೊಸ ವರ್ಷಾಚರಣೆಗೆ ನಿರ್ಬಂಧ | ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ

ಕೋಲಾರ: ‘ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮಂಗಳವಾರದಿಂದ (ಡಿ.28) 10 ದಿನಗಳ ಕಾಲ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ತಿಳಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಕರ್ಫ್ಯೂ ಇರುತ್ತದೆ. ರಾತ್ರಿ 10ರ ನಂತರ ಜಿಲ್ಲೆಯಾದ್ಯಂತ ಕಡ್ಡಾಯವಾಗಿ ಬಾರ್, ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ಮದ್ಯದಂಗಡಿಗಳು ಹಾಗೂ ಹೋಟೆಲ್‌ಗಳನ್ನು ಬಂದ್ ಮಾಡಬೇಕು’ ಎಂದು ಸೂಚಿಸಿದರು.

‘ಸರ್ಕಾರದ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಪಾಲನೆ ಕಡ್ಡಾಯ.…

https://thekolarnews.in/night-curfew-restriction-on-new-years-eve-in-kolar-district/
ನಾಳೆಯಿಂದ ರಾತ್ರಿ ಕರ್ಫ್ಯೂ: ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಓಡಾಟ ನಿಷಿದ್ಧ

ಬೆಂಗಳೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಡಿಸೆಂಬರ್‌ 28ರಿಂದ (ಮಂಗಳವಾರ) 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸಭೆ
ಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದರು. ನಂತರ ರಾತ್ರಿ ಕರ್ಫ್ಯೂ ಜಾರಿ ಕುರಿತು ರಾಜ್ಯ ಸರ್ಕಾರದ…

https://thekolarnews.in/covid-night-curfew-imposed-in-karnataka-from-28th-dec/
ಕೋಲಾರದಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆ

ಕೋಲಾರ: ಜಿಲ್ಲೆಯಲ್ಲಿ ಹೊಸದಾಗಿ 6 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

ಕೋಲಾರ ತಾಲ್ಲೂಕಿನ 5 ಮಂದಿಗೆ, ಮುಳಬಾಗಿಲು ತಾಲ್ಲೂಕಿನ ಒಬ್ಬರಿಗೆ ಸೋಂಕು ತಗುಲಿದೆ. ಈ ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 8 ಮಂದಿ ಗುಣಮುಖರಾಗಿ ಮನೆಗೆ ಮರಳಿದರು.…

https://thekolarnews.in/increased-number-of-active-covid-infections-in-kolar/
Ещё