The Kolar News

Канал
Бизнес
Новости и СМИ
Английский
Логотип телеграм канала The Kolar News
@kolarnewsПродвигать
43
подписчика
807
фото
1
видео
815
ссылок
The Kolar News provides solutions customized to meet your needs and grow your businesses
К первому сообщению
ಮತಾಂತರ ನಿಷೇಧ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ಕೋಲಾರ ಎಸ್ ಡಿಪಿಐ ಪ್ರತಿಭಟನೆ

ಕೋಲಾರ: ಸರ್ವಾಧಿಕಾರಿ ಧೋರಣೆಯ ಮತಾಂತರ ನಿಷೇಧ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ಎಸ್ ಡಿಪಿಐ ಕೋಲಾರ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ಕೋಲಾರ ಜಿಲ್ಲಾಧ್ಯಕ್ಷ ಶಾಹುಜ್ ಜಮಾನ್, ರಾಜ್ಯ ಬಿಜೆಪಿ ಸರಕಾರ ವಿಧಾನ ಸಭಾ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸದೆ ಧರ್ಮಗಳ ಬಗ್ಗೆ ಒಡಕನ್ನು ಉಂಟುಮಾಡುವ ಸಂವಿಧಾನ ವಿರೋಧಿಯಾದ ಕಾನೂನುಗಳನ್ನು ಜಾರಿ ಮಾಡುತ್ತಿದೆ. ಬಲವಂತದ ಮತಾಂತರದ ಪ್ರಕರಣಗಳು ಬೆಳಕಿಗೆ ಬರದಿದ್ದರೂ ಕೂಡ…

https://thekolarnews.in/ಮತಾಂತರ-ನಿಷೇಧ-ಮಸೂದೆ-ಹಿಂಪಡ/
ಕೋಲಾರ: ಎಪಿಎಂಸಿಗೆ ತಿಂಗಳಲ್ಲಿ ಜಮೀನು ಮಂಜೂರು

ಕೋಲಾರ: ‘ಜಿಲ್ಲಾ ಕೇಂದ್ರದ ಎಪಿಎಂಸಿ ಮಾರುಕಟ್ಟೆಗೆ ತಿಂಗಳೊಳಗೆ ಜಮೀನು ಮಂಜೂರು ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಭರವಸೆ ನೀಡಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ತಾಲ್ಲೂಕಿನ ಮಂಗಸಂದ್ರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಹಾಗೂ ಕೆ.ಎಸ್‌.ಪುಟ್ಟಣ್ಣಯ್ಯರ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಎಪಿಎಂಸಿಯಲ್ಲಿ ಜಾಗದ ಸಮಸ್ಯೆಯಿದ್ದು, ಮಾರುಕಟ್ಟೆಗೆ ಬೇರೆಡೆ ಜಮೀನು ನೀಡುವಂತೆ ರೈತರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ’ ಎಂದರು.

‘ಎಪಿಎಂಸಿ ಜಾಗದ ಸಮಸ್ಯೆ ಪರಿಹಾರಕ್ಕೆ ಕಾಲ ಕೂಡಿ ಬಂದಿದೆ. ಮಾರುಕಟ್ಟೆಗೆ ಬೇರೆಡೆ…

https://thekolarnews.in/land-granted-to-apmc-within-a-month-in-kolar/
ಕಾಂಗ್ರೆಸ್‌ನಿಂದ ಜನಪರ ಆಡಳಿತ: ಅನಿಲ್‌ ಕುಮಾರ್‌

ಕೋಲಾರ: ‘ಕಾಂಗ್ರೆಸ್‌ನಿಂದ ಮಾತ್ರ ಜನಪರ ಆಡಳಿತ ಸಾಧ್ಯ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಾಮಧೇನಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ‘ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹಣ ಹಂಚುವಿಕೆಯಲ್ಲಿ ಪೈಪೋಟಿ ನಡೆಸಿದ್ದವು. ಹಿಂದೂಗಳನ್ನು ಗುತ್ತಿಗೆ ಪಡೆದುಕೊಂಡಿದ್ದ ಬಿಜೆಪಿ ಮುಖಂಡರು ದೇವರ ಮೇಲೆ ಆಣೆ ಮಾಡಿಸಿ ಮತ ಕೇಳಿದ್ದರು. ಆದರೆ, ಬುದ್ಧಿವಂತ…

https://thekolarnews.in/peoples-administration-by-congress-says-anil-kumar-mlc-kolar/
Church Vandalised In Chickaballapur As Assembly Debates Anti-conversion Bill

As Karnataka Assembly debates the anti-conversion bill, a church has been attacked Chickaballapur on Thursday. As per visuals from the site, St. Anthony’s statue at a church in Soosaipalya of Chickaballapur district was vandalised and the church’s glass windows were broken. A massive faceoff is currently underway in the Karnataka Assembly between BJP and Congress…

https://thekolarnews.in/church-vandalised-in-chickaballapur-as-assembly-debates-anti-conversion-bill/
ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳಿಲ್ಲದೆ ಸರ್ಕಾರಿ ಉದ್ಯೋಗಿಗಳಿಗೆ ಯಾವುದೇ ಸಂಬಳವನ್ನು ನೀಡಲಾಗುವುದಿಲ್ಲ!

ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳಿಲ್ಲದೆ ಸರ್ಕಾರಿ ಉದ್ಯೋಗಿಗಳಿಗೆ ಯಾವುದೇ ಸಂಬಳವನ್ನು ನೀಡಲಾಗುವುದಿಲ್ಲ ಎಂದು ಪಂಜಾಬ್ ಸರ್ಕಾರವು ಹೊಸ ಆದೇಶದಲ್ಲಿ ಹೇಳಿದೆ.

ಆದೇಶದ ಪ್ರಕಾರ, ಕೋವಿಡ್ -19 ವಿರುದ್ಧ ಸಂಪೂರ್ಣವಾಗಿ ಅಥವಾ ಭಾಗಶಃ ಲಸಿಕೆ ಪಡೆದ ಸರ್ಕಾರಿ ಉದ್ಯೋಗಿ ವೇತನವನ್ನು ಪಡೆಯಲು ರಾಜ್ಯ ಸರ್ಕಾರದ ಉದ್ಯೋಗ ಪೋರ್ಟಲ್‌ನಲ್ಲಿ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಅವರು ಹಾಗೆ ಮಾಡಲು ವಿಫಲವಾದರೆ, ಅವರು ತಮ್ಮ ಸಂಬಳವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಆದೇಶ ಪ್ರಕಟಿಸಿದ್ದಾರೆ.

https://thekolarnews.in/no-pay-without-vaccine-certificate-for-government-employees/
ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳಿಲ್ಲದೆ ಸರ್ಕಾರಿ ಉದ್ಯೋಗಿಗಳಿಗೆ ಯಾವುದೇ ಸಂಬಳವನ್ನು ನೀಡಲಾಗುವುದಿಲ್ಲ!

ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳಿಲ್ಲದೆ ಸರ್ಕಾರಿ ಉದ್ಯೋಗಿಗಳಿಗೆ ಯಾವುದೇ ಸಂಬಳವನ್ನು ನೀಡಲಾಗುವುದಿಲ್ಲ.

ಆದೇಶದ ಪ್ರಕಾರ, ಕೋವಿಡ್ -19 ವಿರುದ್ಧ ಸಂಪೂರ್ಣವಾಗಿ ಅಥವಾ ಭಾಗಶಃ ಲಸಿಕೆ ಪಡೆದ ಸರ್ಕಾರಿ ಉದ್ಯೋಗಿ ವೇತನವನ್ನು ಪಡೆಯಲು ರಾಜ್ಯ ಸರ್ಕಾರದ ಉದ್ಯೋಗ ಪೋರ್ಟಲ್‌ನಲ್ಲಿ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಅವರು ಹಾಗೆ ಮಾಡಲು ವಿಫಲವಾದರೆ, ಅವರು ತಮ್ಮ ಸಂಬಳವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಆದೇಶ ಪ್ರಕಟಿಸಿದ್ದಾರೆ.

https://thekolarnews.in/no-pay-without-vaccine-certificate-for-government-employees/
ಸೇವಾ ಭದ್ರತೆ: ಅತಿಥಿ ಉಪನ್ಯಾಸಕರ ಪ್ರತಿಭಟನೆ

ಕೋಲಾರ: ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಹೋರಾಟ ಬೆಂಬಲಿಸಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಇಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.

ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಸರ್ವಜ್ಞ ಉದ್ಯಾನದ ಬಳಿ ತರಕಾರಿ, ಬೂಟ್ ಪಾಲಿಶ್, ಇಸ್ತ್ರೀ, ಗುಜರಿ ಅಂಗಡಿ ತೆರೆದು ಕಾಫಿ ಟೀ ಹಾಗೂ ಸೌಂದರ್ಯ ವರ್ಧಕಗಳನ್ನು ಮಾರಿ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಪದವಿ ಕಾಲೇಜುಗಳಲ್ಲಿ…

https://thekolarnews.in/service-security-guest-lecturers-protest/
ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಿ: ಮಹೇಶ್‌ ಜೋಶಿ ಆಗ್ರಹ

ಕೋಲಾರ: ‘ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಕನ್ನಡ ಬಾವುಟ ಸುಟ್ಟು ಅವಮಾನಿಸಿರುವವರನ್ನು ರಾಜ್ಯದ್ರೋಹಿಗಳೆಂದು ಪರಿಗಣಿಸಿ ಗಡಿಪಾರು ಮಾಡಬೇಕು’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಆಗ್ರಹಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ‘ಕನ್ನಡದ ಬಾವುಟ ಸುಟ್ಟಿರುವುದು ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿರುವುದು ಹೇಯಕೃತ್ಯ’ ಎಂದು ಗುಡುಗಿದರು.

‘ನಾಡದ್ರೋಹಿಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಜೈಲಿಗೆ ಅಟ್ಟಬೇಕು. ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ…

https://thekolarnews.in/ban-mes-organization-in-the-state-kasapa-mahesh-joshi-in-kolar/
ಬೀದಿ ಬದಿ ವ್ಯಾಪಾರಿಗಳಿಗೆ ಸೌಕರ್ಯ ಕಲ್ಪಿಸಿ- ವಿಧಾನ ಪರಿಷತ್ ಸದಸ್ಯ ಗೋವಿಂದರಾಜು

ಕೋಲಾರ: ‘ಬೀದಿ ಬದಿಯ ಮತ್ತು ತಳ್ಳು ಗಾಡಿ ವ್ಯಾಪಾರಿಗಳ ಸರ್ವೆ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಈ ಬಗ್ಗೆ ಸರ್ಕಾರ ಪರಿಶೀಲನೆ ಮಾಡಿಲ್ಲ. ಇನ್ನಾದರೂ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಸರಿಯಾಗಿ ಸರ್ವೆ ಮಾಡಿ ಅರ್ಹರನ್ನು ಗುರುತಿಸಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸೌಕರ್ಯ ಕಲ್ಪಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಒತ್ತಾಯಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡಿ, ‘ಬೀದಿ ಬದಿಯ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದರೆ, ಸರ್ಕಾರ…

https://thekolarnews.in/facilitate-street-side-traders-says-vidhan-parishat-member-govindaraju/
Karnataka Bandh: ವರ್ಷದ ಕೊನೆಯ ದಿನ ಕರ್ನಾಟಕ ಬಂದ್, ಕನ್ನಡ ಪರ ಸಂಘಟನೆಗಳ ಘೋಷಣೆ

ಬೆಂಗಳೂರು: ಎಂಇಎಸ್ ದಬ್ಬಾಳಿಕೆ, ದೌರ್ಜನ್ಯ ಹಿನ್ನೆಲೆಯಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ಗೆ ನಿರ್ಧಾರ ಮಾಡಿವೆ. ಎಂಇಎಸ್ ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ಬಗ್ಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿಂದು ಮಹತ್ವದ ಸಭೆ ನಡೆದಿದ್ದು ಸಭೆಯಲ್ಲಿ ಕರ್ನಾಟಕ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಎಂಇಎಸ್​ ದಬ್ಬಾಳಿಕೆ, ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳಿಂದ ಡಿ.31ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ.…

https://thekolarnews.in/mes-ban-issue-pro-kannada-organization-announced-karnataka-bandh-on-december-31st/
Karnataka Bandh: ಡಿ 31 ಕರ್ನಾಟಕ ಬಂದ್ -ಯಾರದೆಲ್ಲ ಬೆಂಬಲ ಇದೆ? ಕರವೇ, ಚಿತ್ರೋದ್ಯಮದ ನಿರ್ಧಾರವೇನು?

ಬೆಂಗಳೂರು: ಎಂಇಎಸ್ ದಬ್ಬಾಳಿಕೆ, ಪುಂಡಾಟಿಕೆ ವಿರೋಧಿಸಿ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಮಾಡಿ ಹೋರಾಟಗಾರ ವಾಟಾಳ್ ನಾಗರಾಜ್ ಅಧಿಕೃತ ಘೋಷಣೆ ಮಾಡಿದ್ದಾರೆ. ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಕರ್ನಾಟಕ ಬಂದ್ ಆಗಲಿದೆ. ತುರ್ತುಸೇವೆಗಳನ್ನು ಹೊರತುಪಡಿಸಿ ಎಲ್ಲ ಕಡೆ ಬಂದ್ ಆಗಬೇಕು. ಪಕ್ಷಾತೀತವಾಗಿ ಎಲ್ಲರೂ ಕರ್ನಾಟಕ ಬಂದ್ ಬೆಂಬಲಿಸಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ (Karnataka Bandh).

ಕರ್ನಾಟಕ ಬಂದ್‌ ಬೆಂಬಲ ನೀಡಲಿರುವ ಕನ್ನಡಪರ ಸಂಘಟನೆಗಳು:
ಸುಮಾರು 35 ಸಂಘಟನೆಗಳಿಂದ ಬಂದ್‌ಗೆ ಬೆಂಬಲ…

https://thekolarnews.in/karnataka-bandh-on-december-31-know-who-are-supporting-and-the-decision-of-the-film-industry-is-still-unclear/
ಲಂಚ: ಕೋಲಾರ ಜಿಲ್ಲಾ ಶಸ್ತ್ರಚಿಕಿತ್ಸಕರ ಬಂಧನ

ಕೋಲಾರ: ಎಸ್‌ಎನ್‌ಆರ್ ಜಿಲ್ಲಾ ಆಸ್ಪತ್ರೆಗೆ ಸಾಮಗ್ರಿಗಳನ್ನು ಪೂರೈಸಿದ್ದ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ.ಎಚ್‌.ರವಿಕುಮಾರ್‌ ಮತ್ತು ಸಹಾಯಕ ಆಡಳಿತಾಧಿಕಾರಿ ಗೋಪಾಲಕೃಷ್ಣ ಅವರು ಇಲ್ಲಿ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಗುತ್ತಿಗೆದಾರ ಕಿರಣ್‌ಕುಮಾರ್‌ ಎಂಬುವರು ಎಸ್‌ಎನ್‌ಆರ್‌ ಆಸ್ಪತ್ರೆಗೆ ಕೋವಿಡ್‌ ಸಂದರ್ಭದಲ್ಲಿ ರೋಗಿಗಳ ಬಳಕೆಗಾಗಿ ಪ್ಲೇಟ್‌ ಮತ್ತು ಲೋಟಗಳನ್ನು ಸರಬರಾಜು ಮಾಡಿದ್ದರು. ಇದರ ಬಿಲ್‌ನ ಮೊತ್ತ ₹ 2.50 ಲಕ್ಷ ಮಂಜೂರು ಮಾಡಲು ಗೋಪಾಲಕೃಷ್ಣ ₹ 20…

https://thekolarnews.in/bribery-district-surgeon-arrest-in-kolar/
ಕೋಲಾರ: ಸಮಾಜದಲ್ಲಿ ಮಹಿಳೆ ಅಬಲೆಯಲ್ಲ ಸಬಲೆ- ಉಪನ್ಯಾಸಕಿ ಸವಿತಾ

ಕೋಲಾರ: ‘ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಮಹಿಳೆ ಸಬಲೆಯೇ ಹೊರತು ಅಬಲೆಯಲ್ಲ. ಮಹಿಳೆಯರು ಯಾವುದೇ ಕಾರಣಕ್ಕೂ ಅಸ್ತಿತ್ವ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಬದುಕಬೇಕು’ ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಸವಿತಾ ಹೇಳಿದರು.

ನಗರದ ಹೊರವಲಯದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ’ ಎಂದು ಅಭಿಪ್ರಾಯಪಟ್ಟರು.

‘ಹುಣ್ಣಿಮೆ ಹಾಡು…

https://thekolarnews.in/woman-is-strong-in-society-says-lecturer-savita-in-kolar/
ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿ- ವೇಮಗಲ್‌ ಠಾಣೆ ಇನ್‌ಸ್ಪೆಕ್ಟರ್‌ ಶಿವರಾಜ್‌

ಕ್ಯಾಲನೂರು: ‘ಪ್ರತಿಯೊಬ್ಬರು ದೇಶದ ಕಾನೂನು ಗೌರವಿಸಬೇಕು. ಜತೆಗೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು’ ಎಂದು ವೇಮಗಲ್‌ ಠಾಣೆ ಇನ್‌ಸ್ಪೆಕ್ಟರ್‌ ಶಿವರಾಜ್‌ ಹೇಳಿದರು.

ಕ್ಯಾಲನೂರು ಕ್ರಾಸ್‌ ಬಳಿಯಿರುವ ಸಾಯಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಮಂಗಳವಾರ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವವಾದದ್ದು. ಜನರು ಸಹ ಪೊಲೀಸರ ಸ್ನೇಹಿತರಾಗಿರಬೇಕು’ ಎಂದು ತಿಳಿಸಿದರು.

‘ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚುತ್ತಿದೆ. ಗ್ರಾಮಗಳಿಗೆ ಯಾರೇ ಹೊರಗಿನವರು ಬಂದರೆ ಸ್ಥಳೀಯರಿಗೆ ತಕ್ಷಣ…

https://thekolarnews.in/collaborate-to-maintain-peace-and-order-says-vemagal-station-inspector-shivraj/
ಪುನೀತ್‌ ನಗರ ನಾಮಫಲಕ, ಕನ್ನಡ ಬಾವುಟ ಧ್ವಂಸ; ಆಕ್ರೋಶ

ಬಂಗಾರಪೇಟೆ: ಪುನೀತ್ ರಾಜ್‌ಕುಮಾರ್ ನಗರದ ನಾಮಫಲಕ ಮತ್ತು ಅದಕ್ಕೆ ಅಳವಡಿಸಿದ್ದ ಕನ್ನಡ ಧ್ವಜವನ್ನು ಜೆಸಿಬಿ ಬಳಸಿ ಭಾನುವಾರ ರಾತ್ರಿ ಧ್ವಂಸಗೊಳಿಸಲಾಗಿದ್ದು, ಬಡಾವಣೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಪಟ್ಟಣದ ಕಾಮಸಮುದ್ರ ಮುಖ್ಯರಸ್ತೆಯ ದೇಶಿಹಳ್ಳಿ ರೈಲ್ವೆ ಗೇಟ್ ಸಮೀಪದ ಸದರಿ ಬಡಾವಣೆಯನ್ನು ಕೆಲ ವರ್ಷದ ಹಿಂದೆ ಪುರಸಭೆ ಮಾಜಿ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಎಂ.ಸಿ.ಜೆ. ವೇಲುಮುರುಗನ್ ನಿರ್ಮಿಸಿದ್ದರು. ಈಗ ಅವರೇ ಬಡಾವಣೆ ನಾಮಫಲಕ ಮತ್ತು ಕನ್ನಡ ಧ್ವಜ ಧ್ವಂಸಗೊಳಿಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.

‘ಬಡಾವಣೆಗೆ ಇದುವರೆಗೂ ಹೆಸರು…

https://thekolarnews.in/puneet-city-name-board-kannada-flag-wreck-outrage/
ಬೆಳಗ್ಗೆ 7 ಗಂಟೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಲವೆಡೆ ಲಘು ಭೂಕಂಪ, ಆತಂಕ ಪಡಬೇಡಿ ಎಂದು ಜಿಲ್ಲಾಧಿಕಾರಿ ಲತಾ ಅಭಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಹಲವೆಡೆ ಸ್ಫೋಟದ ಅನುಭವವಾಗಿದೆ. ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ವಿವಿಧೆಡೆ ಕೇಳಿ ಬಂದ ಸದ್ದಿಗೆ ಜನ ಬೆಚ್ಚಿಬಿದ್ದಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪವಾಗಿರುವುದಾಗಿ ಕೇಳಿ ಬಂದಿದೆ. ಜಿಲ್ಲೆಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು ರಿಕ್ಟರ್​ ಮಾಪಕದಲ್ಲಿ 2.9 ರಿಂದ 3 ರಷ್ಟು ತೀವ್ರತೆ ದಾಖಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿ ಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ…

https://thekolarnews.in/explosion-sound-in-chikkaballapur-makes-people-scared/
ಕೋಲ್ಕತ್ತ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಧೂಳಿಪಟ, 144 ರಲ್ಲಿ ಕೇವಲ 1 ಸ್ಥಾನ

ಕೋಲ್ಕತ್ತ: ಕೋಲ್ಕತ್ತ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಟಿಎಂಸಿ ಭಾರೀ ಮುನ್ನಡೆ ಸಾಧಿಸಿದ್ದರೆ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಕೋಲ್ಕತ್ತದ 144 ವಾರ್ಡುಗಳ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಅದರಲ್ಲಿ ಈವರೆಗೆ 101 ಸ್ಥಾನಗಳನ್ನು ಟಿಎಂಸಿ ಗಿಟ್ಟಿಸಿಕೊಂಡಿದೆ. ಇನ್ನೂ 33 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟು 133 ಸ್ಥಾನಗಳನ್ನು ಗೆಲ್ಲಬಹುದು ಎನ್ನಲಾಗಿದೆ.

ರಾತ್ರಿಯ ವೇಳೆಗೆ ಚುನಾವಣೆಯ ಸ್ಪಷ್ಟ ಫಲಿತಾಂಶ ಹೊರ ಬೀಳಲಿದೆ. ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,…

https://thekolarnews.in/bjp-gets-only-one-seat-in-kmc-election-in-kolkata/
New Year 2022 Guidelines: ಹೊಸ ವರ್ಷಾಚರಣೆ, ಕ್ರಿಸ್​ಮಸ್​ ಆಚರಣೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

ಬೆಳಗಾವಿ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ವೇಳೆ (New Year Celebration) ಜನರು ಗುಂಪುಗೂಡದಂತೆ ನಿರ್ಬಂಧದ ಆದೇಶ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುವರ್ಣ ಸೌಧದಲ್ಲಿ ಹೇಳಿಕೆ ನೀಡಿದರು. ಹೊಸವರ್ಷದ ಸಂಭ್ರಮಾಚರಣೆಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತವೆ. ಆದರೆ ಕ್ರಿಸ್​ಮಸ್​ ಹಬ್ಬದಲ್ಲಿ  (Christmas Festival) ಚರ್ಚುಗಳಲ್ಲಿ ಪ್ರಾರ್ಥನೆ ನಡೆಸಲು ಯಾವುದೇ ನಿರ್ಬಂಧಗಳು ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಜನ ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗುವುದು ಎಂದು ಸುವರ್ಣಸೌಧದಲ್ಲಿ ಸಿಎಂ ಬಸವರಾಜ…

https://thekolarnews.in/karnataka-government-announces-new-year-2022-covid-guidelines-amid-rise-of-omicron-cases-in-karnataka-state-here-is-the-detail-in-kannada/
ಎಂಇಎಸ್ ಪುಂಡಾಟಿಕೆ: ಸಂಸದೆ ಸುಮಲತಾರನ್ನ 1 ರೂಪಾಯಿಗೆ ಹರಾಜು ಹಾಕಿದ ವಾಟಾಳ್ ನಾಗರಾಜ್

ಮೈಸೂರು: ನೆರೆಯ ಮಹಾರಾಷ್ಟ್ರದ ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ಮಾಜಿ ಶಾಸಕ ವಾಟಾಳ್ ನಾಗರಾಜ್ ಇಂದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದ ಬಗ್ಗೆ ಸಂಸದರು ಧ್ವನಿ ಎತ್ತುತ್ತಿಲ್ಲವೆಂದು ಅವರ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಲೋಕಸಭಾ ಸದಸ್ಯರನ್ನು ಹರಾಜು ಹಾಕುವ ಮೂಲಕ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿ ಈ ವಿನೂತನ ಪ್ರತಿಭಟನೆ ನಡೆಯಿತು. ಕರ್ನಾಟಕದ ಸಂಸದರ ಭಾವಚಿತ್ರಗಳನ್ನಿಟ್ಟು ಹರಾಜು ಪ್ರಕ್ರಿಯೆ ನಡೆಸಿದರು. 1 ರೂ ಗೆ ಮಂಡ್ಯ ಸಂಸದೆ…

https://thekolarnews.in/vatal-nagaraj-protest-in-mysuru-against-mes-violence-in-belagavi/
ಮತಾಂತರ ತಡೆ ಕಾಯ್ದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ: ಡಿಕೆ ಶಿವಕುಮಾರ್‌

ಬೆಳಗಾವಿ (ಸುವರ್ಣ ವಿಧಾನಸೌಧ): ‘ರಾಜ್ಯದಲ್ಲಿ ಅಶಾಂತಿ ಮೂಡಿಸಲು ಬಿಜೆಪಿಯವರು ಮತಾಂತರ ತಡೆ ಕಾಯ್ದೆ ತರುತ್ತಿದ್ದಾರೆ. ಇದರಿಂದ ಎಲ್ಲರಿಗೂ ಕಸಿವಿಸಿ ಆಗುತ್ತಿದೆ. ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಆಗುತ್ತಿದೆ. ಈ ಕಾನೂನು ಮಾಡುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಇಲ್ಲಿ ಮಾತನಾಡಿದ ಅವರು, ‘ಈ ಕಾಯ್ದೆ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ. ಎಲ್ಲಿಯೂ ಬಲವಂತವಾಗಿ ಮತಾಂತರ ಆಗಿಲ್ಲ. ಖಂಡಿತವಾಗಿಯೂ ಈ ಕಾಯ್ದೆಯನ್ನು ವಿರೋಧಿಸುತ್ತೇವೆ. ನಾವೂ ಮೊದಲಿನಿಂದಲೂ ವಿರೋಧಿಸುತ್ತಿದ್ದೇವೆ.…

https://thekolarnews.in/dk-shivakumar-says-anti-religious-conversion-law-will-be-black-mark-to-our-state/
Ещё