ದರಖಾಸ್ತು ಕಡತಗಳೇ ನಾಪತ್ತೆ! ಕಂದಾಯ ಇಲಾಖೆ ಕಾರ್ಯವೈಖರಿಗೆ ಶಾಸಕಿ ರೂಪಕಲಾ ಅಸಮಾಧಾನ
ಕೆಜಿಎಫ್: ‘ದರಖಾಸ್ತು ಸಮಿತಿಯಲ್ಲಿ ವಿಲೇವಾರಿಯಾಗಬೇಕಾಗಿದ್ದ ಕಡತಗಳು ಹೇಗೆ ಮಾಯವಾಗಿವೆ ಎಂಬುದನ್ನು ಪತ್ತೆಹಚ್ಚಿ ಜಮೀನು ಮಂಜೂರಾತಿಗೆ ಅರ್ಜಿ ನೀಡಿದ ರೈತರಿಗೆ ನ್ಯಾಯ ದೊರಕಿಸಬೇಕು’ ಎಂದು ಶಾಸಕಿ ಎಂ. ರೂಪಕಲಾ ತಾಕೀತು ಮಾಡಿದರು.
ರಾಬರ್ಟಸನ್ ಪೇಟೆಯಲ್ಲಿ ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಂದಾಯ ಇಲಾಖೆ ಸುಪರ್ದಿಯಲ್ಲಿದ್ದ ಕಡತಗಳು ಹೇಗೆ ನಾಪತ್ತೆಯಾಗಿವೆ ಎಂಬುದಕ್ಕೆ ಸಬೂಬು ಹೇಳಬೇಕಾಗಿಲ್ಲ. ಸರ್ಕಾರಿ ಜಾಗವನ್ನು ಉಳಿಸಿಕೊಳ್ಳದೆ ಅತಿಕ್ರಮ ಮಾಡಿಕೊಳ್ಳಲು ಅವಕಾಶ ನೀಡುವುದು ಸರಿಯಲ್ಲ. ತಾಯಿ ಇಲಾಖೆಗೆ ಮೋಸ ಮಾಡಬೇಡಿ. ರೈತರಿಗೆ ನ್ಯಾಯ ಕೊಡಬೇಕಾಗಿರುವುದು…
https://thekolarnews.in/document-are-missing-says-kgf-mla/